9th July 2025
ಗದಗ್ ಬೆಟಗೇರಿ ನಗರಸಭೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಕಾರಿಯಪ್ಪ ಸರ್ಕಲ್ ಹಾಗೂ ಬಸವೇಶ್ವರ ಸರ್ಕಲ್ ಹತ್ತಿರದ ಪ್ಲಾಸ್ಟಿಕ್ ಮಾರಾಟಗಾರರ ಕಿರಾಣಿ ಮತ್ತು ಬೇಕರಿ ಅಂಗಡಿಗಳಿಗೆ ತೆರಳಿ ಅಂದಾಜು 120 ಕೆಜಿ ಯಷ್ಟು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ನಗರಸಭೆಯು ವಶಪಡಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಗದಗ್ ಬೆಟಿಗೇರಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ರಾದ ಆನಂದ್ ಬದಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಅಭಿಯಂತರಾದ ವಿಕಾಸ್ ಹಾಗೂ ನಗರಸಭೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮದಿನ, ಹಸಿರು ಕ್ರಾಂತಿಯ ಹರಿಕಾರರು ಬಾಬು ಜಗಜೀವನ್ ರಾವ್ ಅವರ ಪುಣ್ಯಸ್ಮರಣೆ ಆಚರಣೆ